ನಾಡವರೇ ನಿಜನಾಡಿಗರು
ವೀರತ್ವಕ್ಕೆ ಮತ್ತೊಂದು ಹೆಸರು

ಸಾಮರಸ್ಯದ ಜೀವನಕ್ಕೊಂದು ಉದಾಹರಣೆ - ನಾಡವರ ಸಮಾಜ

Nadavara Logo

ನಾಡವರು

Nadavara Community

ನಾಡವರು ಅಥವಾ ನಾಡವರ ಅಥವಾ ನಾಡೋರ್ ಭಾರತದ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಕೃಷಿ ಸಮುದಾಯವಾಗಿದೆ. ನಾಡವರು ಎಂದರೆ ನಾಡು ಅಥವಾ ದೇಶದ ಜನರು.

ನಾಡವರು ಕನ್ನಡದ ಒಂದು ರೂಪವಾದ ನಾಡವರ-ಕನ್ನಡವನ್ನು ಮಾತನಾಡುತ್ತಾರೆ. ಇದು ಇತರ ಕನ್ನಡ ಉಪಭಾಷೆಗಳಿಂದ ಗಮನಾರ್ಹವಾದ ಧ್ವನಿ ವ್ಯತ್ಯಾಸಗಳನ್ನು ಹೊಂದಿದೆ. ಇದರ ರೂಪವಿಜ್ಞಾನವು ಮರಾಠಿಯಂತೆಯೇ ಇರುತ್ತದೆ.

1883 ರ ಕೆನರಾ ಗೆಜೆಟ್‌ನ ಪ್ರಕಾರ, ಪುರುಷರು ಮತ್ತು ಮಹಿಳೆಯರು ಇಬ್ಬರೂ ಎತ್ತರ ಮತ್ತು ಬಲಶಾಲಿಯಾಗಿದ್ದರು ಮತ್ತು ಅವರಲ್ಲಿ ಹೆಚ್ಚಿನವರು ಉತ್ತಮವಾಗಿ ಕಾಣಿಸಿಕೊಂಡಿದ್ದರು. ಅನೇಕರು ದೊಡ್ಡ ಪ್ರಮಾಣದ ಭೂಮಿಯನ್ನು ಹೊಂದಿದ್ದಾರೆ. ಕೆಲವರು ಗ್ರಾಮದ ಮುಖ್ಯಸ್ಥರು ಮತ್ತು ಲೇವಾದೇವಿಗಾರರಾಗಿದ್ದರು. ಇವುಗಳು ಈಗ ಮುಖ್ಯವಾಗಿ ಅಂಕೋಲಾ ಮತ್ತು ಕುಮಟಾ ತಾಲೂಕುಗಳಲ್ಲಿ ಕಂಡುಬರುತ್ತವೆ.

Read More

ನಾಡವರ ಸಮಾಜ ಬೆಂಗಳೂರು

ಬೆಂಗಳೂರು ನಾಡವರ ಸಮಾಜ ಒಂದು ಸಂಘ ಸಂಸ್ಥೆಗಳ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಾಯಿತ ಸಂಘವಾಗಿದೆ. ನಾಡವರ ಬಹುತೇಕರ ಮೂಲ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕುಮಟಾ ತಾಲೂಕಾಗಿದ್ದು ಇಂದು ನಾಡವರು ದೇಶ ವಿದೇಶಗಳಲ್ಲೂ ನೆಲೆ ಕಂಡುಕೊಂಡಿದ್ದಾರೆ. ಶಿಕ್ಷಣ, ಉದ್ಯೋಗ, ಉದ್ಯಮವನ್ನು ನಿರ್ವಹಿಸಲು ಇಂದು ನಾಡವರ ಸಮಾಜದ ಜನರು ಉತ್ತರ ಕನ್ನಡ ಜಿಲ್ಲೆ ಬಿಟ್ಟರೆ ಹೆಚ್ಚಿನದಾಗಿ ಬೆಂಗಳೂರಿನಲ್ಲಿ ನೆಲೆ ನಿಂತಿದ್ದಾರೆ.

ಬೆಂಗಳೂರಿನಲ್ಲಿ ವಾಸವಿರುವ ಎಲ್ಲ ನಾಡವರನ್ನು ಒಗ್ಗೂಡಿಸಲು ಹುಟ್ಟಿಕೊಂಡ ಸಂಘವೇ "ನಾಡವರ ಸಮಾಜ ಬೆಂಗಳೂರು" . ನಮ್ಮ ನಾಡವರ ಸಂಸ್ಕೃತಿ, ಕಲೆ, ಆಚಾರ-ವಿಚಾರ, ಇತಿಹಾಸ, ಅಡುಗೆ, ಅಧ್ಯಯನ ಹೀಗೆ ಎಲ್ಲವನ್ನು ಮುಂದಿನ ಪೀಳಿಗೆಗೂ ಮುಟ್ಟಿಸುವಲ್ಲಿ ಸಂಘದಿಂದ ವಿನೂತನ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿ ಇಂದು ನಾಡವರ ಸಮಾಜ ಬೆಂಗಳೂರು ಒಂದು ಸಧೃಡ ಸಂಘವಾಗಿ ಬೆಳೆಯುತ್ತಿದೆ. ಬೆಂಗಳೂರು ನಾಡವರ ಹಬ್ಬ ಇಂದು ನಾಡವರ ಸಾಂಸ್ಕೃತಿಕ ಉತ್ಸವದಂತೆ ರೂಪುಗೊಂಡಿದ್ದು ಆ ಒಂದು ದಿನ ಬೆಂಗಳೂರಿನಲ್ಲಿ ನೆಲೆಸಿರುವ ನಾಡವರಷ್ಟೇ ಅಲ್ಲದೆ ಊರಿನಿಂದಲೂ ಜನ ಜೊತೆಯಾಗುತ್ತಿರುವುದು ನಮಗೆ ಹೆಮ್ಮೆಯ ವಿಷಯ.

ನಮ್ಮವರು ನಮ್ಮ ಹೆಮ್ಮೆ

ಸಾಧನೆಗೆ ಇನ್ನೊಂದು ಹೆಸರೇ ನಾಡವರು ಎಂದರೆ ನಾಡನ್ನಾಳಿದ ವೀರರು ಎಂಬ ಪ್ರತೀತಿ ಇದೆ. ಈ ಸಮಾಜದಲ್ಲಿ ಜನಿಸಿದ ಪ್ರತಿಯೊಬ್ಬರೂ ಒಂದಿಲ್ಲೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿರುತ್ತಾರೆ. ನಾಡವರ ಸಮಾಜ ಬೆಂಗಳೂರು ಕಳೆದ ಕೆಲವು ವರ್ಷಗಳಿಂದ ನಮ್ಮ ನಾಡವರ ಸಾಧಕರನ್ನು "ನಾಡವರ ಹಬ್ಬ"ದ ಮುಖ್ಯ ಅತಿಥಿಗಳಾಗಿ ಕರೆದು ಸನ್ಮಾನಿಸಿ ಗೌರವಿಸುತ್ತಿದೆ. ಅಂತಹ ಸಾಧಕರ ಸವಿಸ್ತಾರವಾದ ದಾಖಲೀಕರಣದ ಪುಟವೇ "ನಮ್ಮವರು ನಮ್ಮ ಹೆಮ್ಮೆ". ಮುಂದಿನ ದಿನಗಳಲ್ಲಿ ಈ ಪುಟದಲ್ಲಿ ಇನ್ನು ಹೆಚ್ಚಿನ ಸಾಧಕರ ಪಟ್ಟಿ ಬೆಳೆಯುತ್ತ ನಮ್ಮ ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸಲಿದ್ದೇವೆ.

ಶ್ರೀಮತಿ ಆಶಾ ಮತ್ತು ಶ್ರೀ ದೇವರಾಯ ವಿ ನಾಯಕ
ಶ್ರೀಮತಿ ಆಶಾ ಮತ್ತು ಶ್ರೀ ದೇವರಾಯ ವಿ ನಾಯಕ

ಆದರ್ಶ ಕೃಷಿ ದಂಪತಿಗಳು

“ಅಲ್ಪ ಸಂಪನ್ಮೂಲದಲ್ಲಿಯೇ ನವೀನ ಆಲೋಚನೆ ಹಾಗೂ ಶ್ರಮವನ್ನು ಮಿಶ್ರಿಸಿ ಕೃಷಿಯನ್ನು ಜೀವನದ ಆಧಾರವನ್ನಾಗಿಸಿಕೊಂಡಾಗ ಯಶಸ್ಸು ಖಚಿತ - ಆಶಾ ನಾಯಕ ಮತ್ತು ದೇವರಾಯ ನಾಯಕ”

ದಿ. ಡಾ || ಎನ್ ಆರ್ ನಾಯಕ
ದಿ. ಡಾ || ಎನ್ ಆರ್ ನಾಯಕ

ನಿವೃತ್ತ ಪ್ರಾಂಶುಪಾಲರು ಹಾಗೂ ಹಿರಿಯ ಸಾಹಿತಿಗಳು

“Preserving folklore is preserving the soul of our cultural identity for future generations." - Dr. N.R. Nayak”

ದಿ . ಶ್ರೀ ಎಸ್ ಆರ್ ನಾಯಕ
ದಿ . ಶ್ರೀ ಎಸ್ ಆರ್ ನಾಯಕ

ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರು ಹಾಗೂ ಮಾನವ ಹಕ್ಕು ಆಯೋಗದ ಅಧ್ಯಕ್ಷರು

“Justice must not only be done, but must also be seen to be done." - Justice S.R. Nayak”

ಶ್ರೀ ಮೋಹನ ಎಂ ಕವರಿ
ಶ್ರೀ ಮೋಹನ ಎಂ ಕವರಿ

ಉದ್ದಿಮೆದಾರರು, ಮುಂಬೈ

“The success of any organization lies in the commitment and hard work of its team." - Mohan Kavrie”

ಡಾ|| ನಿರಂಜನ್ ಕೆ. ನಾಯಕ
ಡಾ|| ನಿರಂಜನ್ ಕೆ. ನಾಯಕ

ವಿಜ್ಞಾನಿಗಳು, ಮುಂಬೈ

“"Excellence in research and education is the foundation for technological advancement and national development." - Dr. Niranjan”

ಕಾರ್ಯಕ್ರಮಗಳು

ನಮ್ಮ ಸಮುದಾಯದ ವಿಶೇಷ ಕಾರ್ಯಕ್ರಮಗಳು

ಕಾರ್ಯಕಾರಿ ಸಮಿತಿ

ನಾಡವರ ಸಮಾಜ ಬೆಂಗಳೂರು ಇದರ ಪ್ರಸ್ತುತ ಕಾರ್ಯಕಾರಿ ಸಮಿತಿ ಸದಸ್ಯರುಗಳ ವಿವರ

ಅರವಿಂದ್ ಎನ್ ನಾಯಕ್
ಅರವಿಂದ್ ಎನ್ ನಾಯಕ್
ಅಧ್ಯಕ್ಷರು
ಪ್ರಮೋದ್ ಆರ್ ನಾಯಕ್
ಪ್ರಮೋದ್ ಆರ್ ನಾಯಕ್
ಉಪಾಧ್ಯಕ್ಷರು
ದಿನೇಶ್ ಎನ್ ಗಾವಂಕರ್
ದಿನೇಶ್ ಎನ್ ಗಾವಂಕರ್
ಕಾರ್ಯದರ್ಶಿ
ಶೇಖರ್ ಗಾವಂಕರ್
ಶೇಖರ್ ಗಾವಂಕರ್
ಜಂಟಿ ಕಾರ್ಯದರ್ಶಿ
ಹರೀಶ್ ಜಿ ನಾಯಕ್
ಹರೀಶ್ ಜಿ ನಾಯಕ್
ಖಜಾಂಚಿ
ಆಕಾಶ್ ಗಾವಂಕರ್
ಆಕಾಶ್ ಗಾವಂಕರ್
ಸದಸ್ಯರು
ರಾಘವೇಂದ್ರ ನಾಯಕ್
ರಾಘವೇಂದ್ರ ನಾಯಕ್
ಸದಸ್ಯರು
ಸಂಧ್ಯಾ ಎನ್ ನಾಯಕ್
ಸಂಧ್ಯಾ ಎನ್ ನಾಯಕ್
ಸದಸ್ಯರು
ಶ್ವೇತಾ ಎಂ. ನಾಯಕ್
ಶ್ವೇತಾ ಎಂ. ನಾಯಕ್
ಸದಸ್ಯರು
ಅಮರ್ ನಾಯಕ್
ಅಮರ್ ನಾಯಕ್
ಸದಸ್ಯರು
ವಿಘ್ನೇಶ್ ನಾಯಕ್
ವಿಘ್ನೇಶ್ ನಾಯಕ್
ಸದಸ್ಯರು

Ready to Join Our Community?

Become a part of the Bengaluru Nadavara Sangha family and connect with your roots