ನಾಡವರ ಮಾತುಕತೆ

ನಾಡವರ ಸಮಾಜ ಬೆಂಗಳೂರು ಇವರಿಂದ ವಿನೂತನವಾಗಿ ರೂಪುಗೊಂಡ ಕಾರ್ಯಕ್ರಮ "ನಾಡವರ ಮಾತುಕತೆ". ರಾಜಧಾನಿಯಲ್ಲಿ ನೆಲೆಸಿರುವ ಬಹುತೇಕ ನಾಡವರು ಬೆಂಗಳೂರಿನ ಎಲ್ಲ ದಿಕ್ಕುಗಳಲ್ಲಿ ವಾಸವಾಗಿದ್ದಾರೆ. ನಾಡವರ ಹಬ್ಬ ಬೆಂಗಳೂರು ಎಲ್ಲರನ್ನು ಒಂದೇ ಸೂರಿನಡಿ ಕಲೆತು ಬೆರೆಯಲು ಅವಕಾಶ ಕಲ್ಪಿಸಿತ್ತು. ಆ ದಿನ ಎಲ್ಲರು ಒಂದೆಡೆ ಸೇರಿ ಸಂಭ್ರಮಿಸುವ ದಿನವಾದುದರಿಂದ ಸಂಘದ ಬೆಳವಣಿಗೆಯ ಕುರಿತಾಗಿ ಸಮಾಜ ಬಾಂಧವರೊಂದಿಗೆ ಚರ್ಚಿಸಲು ಪ್ರತ್ಯೇಕ ವೇದಿಕೆಯ ಅವಶ್ಯಕತೆ ಇತ್ತು. ಇದನ್ನು ಮನಗಂಡು ನಾಡವರ ಸಮಾಜ ಬೆಂಗಳೂರು ಎಲ್ಲ ದಿಕ್ಕುಗಲ್ಲಿ ನೆಲೆಸಿರುವ ಬೆಂಗಳೂರು ನಡವರನ್ನು ಭೇಟಿ ಮಾಡಲು "ಸಮಾಜದ ನಡೆ - ನಿಮ್ಮ ಕಡೆ" ಎಂಬ ಶೀರ್ಷಿಕೆ ಅಡಿಯಲ್ಲಿ ಕಾರ್ಯಕ್ರಮವನ್ನು ರೂಪಿಸಿದೆ. ಈಗಾಗಲೇ ಪೂರ್ವ ಹಾಗು ದಕ್ಷಿಣ ಭಾಗಗಳಲ್ಲಿ ಎರಡು ಪ್ರತ್ಯೇಕ ಸಭೆ ನಡೆಸಿ ನಾಡವರ ಸಂಘವನ್ನು ಬೆಳೆಸುವ ನಿಟ್ಟಿನಲ್ಲಿ ಎಲ್ಲರ ಸಲಹೆಗಳನ್ನು ಪಡೆದು ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನದಲ್ಲಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ ಪ್ರದೇಶಗಳಲ್ಲೂ ಸಭೆ ನಡೆಸುವ ಉದ್ದೇಶವಿದ್ದು , ವರ್ಷದ ೩ ತಿಂಗಳಿಗೊಮ್ಮೆ ಒಂದೊಂದು ಭಾಗದಲ್ಲಿ ಅರ್ಧ ದಿನ ನಮ್ಮವರೊಂದಿಗೆ ಕಳೆದು, ಸಂಘದ ಬೆಳವಣಿಗೆಯ ಬಗ್ಗೆ ಚರ್ಚಿಸಿವ ಅವಕಾಶವನ್ನು ನಾಡವರ ಸಮಾಜ ಬೆಂಗಳೂರು ಕಲ್ಪಿಸಲಿದೆ.