ನಾಡವರ ಪ್ರವಾಸ

ನಾಡವರ ಸಮಾಜ ಸ್ಥಾಪನೆಯಾದಾಗಿನಿಂದ ಹತ್ತು ಹಲವಾರು ವಿವಿಧ ಪ್ರವಾಸಿ ಸ್ಥಳಗಳಿಗೆ ಒಂದು ದಿನದ ಪ್ರವಾಸವನ್ನು ಆಯೋಜಿಸಲಾಗುತ್ತಿದೆ. ಸದರಿ ಪ್ರವಾಸದಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡ ಸದಸ್ಯರು ಹಿರಿ-ಕಿರಿಯರೆನ್ನದೆ ಒಟ್ಟಾಗಿ ಬೆರೆತು, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ, ಮನರಂಜನಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು, ಹರಟೆ-ಮಾತುಕತೆಗಳೊಂದಿಗೆ ತಮ್ಮ ಕಷ್ಟ-ಕಾರ್ಪಣ್ಯಗಳನ್ನು ಮರೆತು ನಗುನಗುತ್ತಾ ಕಾಲಕಳೆದು, ಸುಂದರ ನೆನಪುಗಳೊಂದಿಗೆ ತಮ್ಮ ಮನೆಗಳಿಗೆ ವಾಪಾಸ್ಸಾಗುವ ಕಾರ್ಯವು ಈ ಪ್ರವಾಸದಿಂದ ಸಾಧ್ಯವಾಗಿರುತ್ತದೆ. ಒಟ್ಟಾಗಿ ಬಸ್ಸಿನಲ್ಲಿ ಪ್ರಯಾಣಿಸುವ, ಒಟ್ಟಾಗಿ ಕುಳಿತು ಊಟ ಮಾಡುವ, ಚಿಕ್ಕ ಮಕ್ಕಳ ಆಟಗಳನ್ನು ನೋಡಿ ಆನಂದಿಸುವ ಅವಕಾಶ ಈ ಪ್ರವಾಸದಿಂದ ಸಿಗುತ್ತಿದೆ.