ಅಧ್ಯಕ್ಷರ ಮುನ್ನುಡಿ

ಅಧ್ಯಕ್ಷರ ಫೋಟೋ

ಗೌರವಾನ್ವಿತ ಸಮಾಜ ಬಾಂಧವರೇ

ಸಪ್ರೇಮ ವಂದನೆಗಳು

ನಾವು ನಾಡವರು ವಿಶೇಷವಾಗಿ ಕರ್ನಾಟಕದ ಕರಾವಳಿಯ ಮಧ್ಯ ಭಾಗದಿಂದ ಬಂದವರು. ನಾಮಾoಕಿತ ದಿಂದಲೇ ನಮ್ಮ ನಾಯಕತ್ವವನ್ನು, ಮುಂದಾಳತ್ವವನ್ನು ಗುರುತಿಸಿ ಕೊಂಡ ನಾಯಕರು. ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿ ಅದರ ಹೆಜ್ಜೆ ಗುರುತುಗಳನ್ನು ಕಾಯ್ದು ಕೊಂಡು ಇತರ ಸಮಾಜಗಳಿಗೆ ಮಾದರಿಯಾಗಿ ಪರಿಣಮಿಸಿದ್ದಾರೆ.

ನಮ್ಮ ಸ್ವಾತಂತ್ರ್ಯಕಾಲದ ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ನಾಡವರ ಯಶೋಗಾಥೆ ಅವಿಷ್ಮರಣೀಯವಾದುದು. ಅಂದು ನಾಡವರು, ನಾಡಿಗಾಗಿ, ದೇಶಕ್ಕಾಗಿ, ಸ್ವಾಭಿಮಾನಕ್ಕಾಗಿ, ತಮ್ಮ ಹೆಂಡತಿ, ಮಕ್ಕಳು, ಆಸ್ತಿ, ಅಂತಸ್ತು ಗಳನ್ನು ಲೆಕ್ಕಿಸದೆ ಸ್ವಾತಂತ್ರ್ಯಕ್ಕಾಗಿ ನಡೆದ ಮುಖ್ಯ ಚಳುವಳಿಗಳಾದ ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿ, ಕರನಿರಾಕರಣೆ, ಜಂಗಲ್ ಸತ್ಯಾಗ್ರಹ, ಕಾಯ್ದೆ ಭಂಗ ಚಳುವಳಿ, ಚಲೇಜಾವ್ ಚಳುವಳಿ ಹೀಗೆ ಹಲವು ಚಳುವಳಿಗಳಲ್ಲಿ ದುಮುಖಿ ತಮ್ಮ ಪ್ರಾಣವನ್ನು ಮುಡುಪಾಗಿಟ್ಟು ಸೆರೆಮನೆ ವಾಸ ಮಾಡಿರುವುದು ತಮಗೆಲ್ಲರಿಗೂ ತಿಳಿದ ವಿಷಯ ಮತ್ತು ರೋಮಾಂಚನ ಕರವಾದುದು.

ಇಂತಹ ಕಠಿಣ ಪರಿಸ್ಥಿತಿ ಗಳನ್ನು ಎದುರಿಸಿ ಮೆಟ್ಟಿ ನಿಂತು ಬದುಕುತ್ತಾ ಬಂದಿರುವುದು ಸಮಾಜಕ್ಕೆ ಗೌರವ ಮತ್ತು ನಾವೆಲ್ಲರೂ ಹೆಮ್ಮೆ ಪಡುವಂತಹದ್ದು.

ನಾಡವರ ಧೈರ್ಯ, ಸಾಹಸ, ತ್ಯಾಗ ಮತ್ತು ಕಳಕಳಿಯ ಬಗ್ಗೆ ನಮ್ಮ ಜಿಲ್ಲೆಯ "ಚುಟುಕು ಬ್ರಹ್ಮ" ಕವಿ ದಿನಕರ ದೇಸಾಯಿಯವರ ಕವನದ ಸಾಲುಗಳು

ನಾಡವರೇ ನಿಜ ನಾಡಿಗರು!
ನೋಡು ಕಾಳಗವ ಹೂಡಿದರು!
ಸ್ವಾತಂತ್ರ್ಯದ ಸುಖದೂಟವನ್ನುಂಡು! ವಿಜಯನಗರದಲಿ ಕಾದಿದ ದಂಡು!
ನಾಡವರಂದಿನ ದಾಸ್ಯವ ಕಂಡು!
ಉಪ್ಪು ಮಾಡುವವರು ಮುಂದಕೆ ಬಂದು!
ನಾಡವರೇ ನಿಜ ನಾಡಿಗರು!!
ಹಿಂದಿನ ಹುರುಪೇ ಇಂದಿಗೆ ಮಾಡಿ!
ನಾಡವರೆಲ್ಲರೂ ಒಂದಡೆ ಗೂಡಿ!
ಗಾಂಧಿ ಮಹಾತ್ಮನ ಕೊಂಬನು ಕೇಳಿ!
ನೆಗೆದು ಕಾದುವರು ಧೈರ್ಯವ ತಾಳಿ!
ನಾಡವರೇ ನಿಜ ನಾಡಿಗರು!!

ಹಿಂದಿನಿಂದಲೂ ಕೃಷಿ ಯನ್ನು ಮುಖ್ಯ ಆಧಾರ ವಾಗಿಟ್ಟುಕೊಂಡು ಬಾಳಿ ಬದುಕುತ್ತಾ, ಗ್ರಾಮ ಮಟ್ಟದಲ್ಲಿ ಪಟೇಲರಾಗಿ, ಗಾವಂಕರ, ಸೀಮೆ ಗಾವಂಕರ, ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ,ಅಲ್ಲದೇ ವಿಶೇಷ ಎಂದರೆ ರಾಜ್ಯ ದಲ್ಲಿ ಸಭಾಪತಿ ಗಳಾಗಿ, ರಾಷ್ಟ್ರದಲ್ಲಿ ಮೆಂಬರ್ ಆಫ್ ಪಾರ್ಲಿಮೆಂಟ್ ಆಗಿ ಮುಂದೆ ಬಂದವರು ಎಂಬ ಗರಿಮೆ ನಮ್ಮ ಸಮಾಜದ ಹೆಮ್ಮೆ ಎಂದು ತಿಳಿಸ ಬಯಸುತ್ತೇನೆ.

ಸರಕಾರಿ ಸೇವೆಯಲ್ಲಿ, ಹೆಚ್ಚಿನದಾಗಿ ಶಿಕ್ಷಣ ಇಲಾಖೆ, ಬ್ಯಾಂಕಗಳು ಹಾಗೂ ಎಲ್ಲಾ ವಿಭಾಗಗಳಲ್ಲಿಯೂ ತಮ್ಮ ತಮ್ಮ ಅಹೃತೆಗೆ ಅನುಗುಣವಾಗಿ ನಾಗರಿಕ ಸೇವೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ವರೆಗೆ, ಅಲ್ಲದೇ ವಕೀಲರು, ನ್ಯಾಯಾಧೀಶರು, ಮುಖ್ಯ ನ್ಯಾಯಾಧೀಶರು ಹೀಗೆ ಹಲವು ಮಜಲುಗಳಲ್ಲಿ ಸಾಮ, ದಾನ, ಬೇಧ ದಂಡೋಪಾಯಗಳನ್ನು ಚೆನ್ನಾಗಿ ಅರಿತು ಬಳಸಿಕೊಂಡು ಆಡಳಿತದ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಬಂದಿರುವುದು ಗಮನಾರ್ಹವಾದ ಸಂಗತಿ. ಅಷ್ಟೇ ಅಲ್ಲದೆ ಖಾಸಗಿ ಕ್ಷೇತ್ರದಲ್ಲಿಯೂ ನಮ್ಮವರು ಅತ್ಯುನ್ನತ ಸ್ಥಾನವನ್ನು ಅಲಂಕರಿಸಿರುತ್ತಾರೆ ಹಾಗೆಯೇ ಸ್ವಂತ ಉದ್ಯಮದಲ್ಲಿ ತೊಡಗಿಸಿಕೊಂಡು ಉದ್ಯಮಿಪತಿಗಳಾಗಿ ಮುಂದಿನ ಪೀಳಿಗೆಗೆ ಮಾದರಿ ಆಗಿದ್ದರೆ

ಈಗಿನ ಸರ್ಕಾರಗಳು ಹೇಳುವ ಹಾಗೆ self reliance, make in India, startup India, standup India ಇವೆಲ್ಲವುಗಳನ್ನು ನಾವು ನಮ್ಮ ಹಿರಿಯರ ಅಣತೆಯಂತೆ ಇರಬಹುದು ಅಥವಾ ನಮ್ಮಲ್ಲಿ ರಕ್ತಗತವಾಗಿ ಬಂದಿರಬಹುದು. ಆದರೆ, ನಮ್ಮೆಲ್ಲರ ದ್ಯೇಯ ಉದ್ದೇಶಗಳು ಮಾತ್ರ ಒಂದೇ ಏನೆಂದರೆ ಸ್ವಾವಲಂಬಿಯಾಗಿ ಬದುಕಬೇಕು.ಜೊತೆಗೆ ಸಮಾಜಕ್ಕಾಗಿ, ನಾಡಿಗಾಗಿ, ದೇಶಕ್ಕಾಗಿ ಸೇವೆ ಸಲ್ಲಿಸುವ ಮನೋಭಾವನೆ ಬೆಳೆಸಬೇಕು. ಅಂದಾಗ ಮಾತ್ರ ನಾವು ಅಭಿವೃದ್ಧಿಯಾಗಿ ಸಮಾಜ ಮತ್ತು ನಾಡು ಸಮೃದ್ಧಿಯಾಗುತ್ತದೆ.

"ಪರಿವರ್ತನೆ ಜಗದ ನಿಯಮ"

ಹಿಂದೆ ನಾವು ನೀವೆಲ್ಲ ತಿಳಿದ ಇತಿಹಾಸದಂತೆ ಪ್ರಾಚೀನಯುಗ, ಮಧ್ಯಯುಗ, ಆಧುನಿಕ ಯುಗಗಳೆಂದು ಪರಿಗಣಿಸುತ್ತೇವೆ. ಈಗಿನ ಯುಗ ಡಿಜಿಟಲ್ ಯುಗವಾಗಿದ್ದು, "ನಾಡವರ ಸಮಾಜ ಬೆಂಗಳೂರು", ಇದನ್ನು ಮನಗಂಡು ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಸಮಾಜ ಬಾಂಧವರೊಡನೆ ಶೀಘ್ರ ಮತ್ತು ಹೆಚ್ಚಿನ ಸoವಹನ, ಪರಸ್ಪರ ಸಂಬಂಧ ಬೆಳೆಸಿ, ಸಂಘಟಿತವಾಗಿ ಸಂಘವನ್ನು ಬಲಪಡಿಸುವ ಸಲುವಾಗಿ " ಬೆಂಗಳೂರು ನಾಡವರ ವೆಬ್ ಸೈಟ್ " ನ್ನು ನಿರ್ಮಿಸಲಾಗಿದೆ. ಇಂದಿನ ಪಿಳೀಗೆಗೆ ಬೇಕಾಗುವ ಹೆಚ್ಚಿನ ತಂತ್ರಜ್ಞಾನವನ್ನು ಅಳವಡಿಸಿ ಎಲ್ಲರಿಗೂ ವಿವಿಧ ರೀತಿಯಲ್ಲಿ ಬಹುಪಯೋಗ ವಾಗುವಂತೆ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ವಾದುದ್ದು. ಇದು ನಾಡವರ ಸಮಾಜ ಬೆಂಗಳೂರಿನ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಮತ್ತು ದೊಡ್ಡ "ಡಿಜಿಟಲ್ ಆಸ್ತಿ " ಎಂದರೆ ತಪ್ಪಾಗಲಾರದು.

ಇಂತಹ ತಂತ್ರಜ್ಞಾನದ ವೆಬ್ ಸೈಟನ್ನು ಸಮಾಜದ ಬಾಂಧವರೆಲ್ಲರು ವಿಶೇಷವಾಗಿ ಯುವ ಪೀಳಿಗೆಯವರು ಸದುಪಯೋಗ ಪಡೆದುಕೊಂಡು, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕೈ ಜೋಡಿಸಲು ಕಳಕಳಿಯಿಂದ ಮನವಿಮಾಡುತ್ತೇನೆ.

ನಾವು ಯಾವುದೇ ಹಣ ಸಂಪಾದನೆ, ಯಶಸ್ಸು, ಅಂತಸ್ತುಗಳು ನಾವು ಬದುಕಿರುವಾಗ ಮಾತ್ರ. "ಅಳಿಯುವುದು ಕಾಯ, ಉಳಿಯುವುದು ಕೀರ್ತಿ " ಎಂಬಂತೆ ನಾವು ಮಾಡಿ ಸಾಧಿಸಿದ ಸಮಾಜ ಮುಖಿ ಕೆಲಸಗಳು ಮಾತ್ರ ಅಜರಾಮರ ವಾಗಿರುತ್ತದೆ.

ಇಂದು ಶೈಕ್ಷಣಿಕವಾಗಿ ಶೇಕಡಾ 100 ರಷ್ಟು ಮುಂದುವರಿದ ನಾವೆಲ್ಲರೂ ಮುಂದಿನ ಭವಿಷ್ಯ ಕ್ಕಾಗಿ ಒಳ್ಳೆಯ ಕೆಲಸಗಳನ್ನು ಮಾಡಿ ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿ ದಾರಿದೀಪವಾಗಿ ಸಮಾಜವನ್ನು ಮಾದರಿ ಮಾಡಲು ಪ್ರಯತ್ನಿಸೋಣ.

ಧನ್ಯವಾದಗಳು

ಅರವಿಂದ ಏನ್. ನಾಯಕ
ಅಧ್ಯಕ್ಷರು
ನಾಡವರ ಸಮಾಜ (ರಿ), ಬೆಂಗಳೂರು
+91 94498 30044