ಸಾಮಾಜಿಕ ಕಾರ್ಯಕ್ರಮಗಳು

1. ವೈದ್ಯಕೀಯ ನೆರವು:

ನಾಡವರ ಸಮಾಜ ಬೆಂಗಳೂರು, ಇದು ಸಾಮಾಜಿಕ ಬದ್ಧತೆಯನ್ನು ಹೊಂದಿದ್ದು, ಬೆಂಗಳೂರಿನಲ್ಲಿ ವಾಸಿಸುವ ನಾಡವರ ಜೊತೆಗೆ ವಿವಿಧ ಊರುಗಳಲ್ಲಿ ವಾಸಿಸುತ್ತಿರುವ ನಾಡವರದಲ್ಲಿ ಯಾರಾದರೂ ತೀವ್ರತರನಾದ ಖಾಯಿಲೆಗೆ ತುತ್ತಾಗಿ, ವೈದ್ಯಕೀಯ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಕಡುಬಡವರನ್ನು ಗುರುತಿಸಿ, ಅವರ ಕೋರಿಕೆಯ ಮೇರೆಗೆ ರೂ.25,000/- ಗಳನ್ನು ಮೀರದಂತೆ ಹಲವಾರು ಜನರಿಗೆ ವೈದ್ಯಕೀಯ ನೆರವನ್ನು ನೀಡುತ್ತಾ ಬಂದಿದೆ. ಸದರಿ ನೆರವನ್ನು ಪಡೆಯಲು ಅರ್ಹವಲ್ಲದ ಪ್ರಕರಣವೊಂದರಲ್ಲಿ ಮಾನವೀಯತೆಯಿಂದ ಶ್ರೀ ಎಂ.ಆರ್. ನಾಯ್ಕ್ರವರು ತಮ್ಮ ಕೈಯಾರೆ ರೂ.25,000/- ಗಳನ್ನು ನೀಡಿರುತ್ತಾರೆ. ಸಮಾಜದ ಬಡವರಿಗೆ ವೈದ್ಯಕೀಯ ನೆರವನ್ನು ನೀಡುವ ಸಲುವಾಗಿ ಪ್ರತ್ಯೇಕ ಮೆಡಿಕಲ್ ಫಂಡ್ ಅನ್ನು ಸ್ಥಾಪಿಸಿದ್ದು, ಇದಕ್ಕಾಗಿ ಈ ಹಿಂದೆ ಯಕ್ಷಗಾನವನ್ನು ಏರ್ಪಡಿಸಿ ಹಣವನ್ನು ಸಂಗ್ರಹಿಸಲಾಗಿರುತ್ತದೆ.

2. ನೆರೆ ಸಂತ್ರಸ್ತರಿಗೆ ನೆರವು:

ಈ ಹಿಂದೆ ಕಾಳಿನದಿಗೆ ನೆರೆ ಬಂದಾಗ, ಕಾರವಾರದ ಸುತ್ತಮುತ್ತಲಿನ ಹಳ್ಳಿಗಳ ಸಂತ್ರಸ್ತರಿಗೆ ಶ್ರೀ ಬಿ.ಟಿ. ನಾಯಕ, ಶ್ರೀ ದಿನೇಶ ಗಾಂವಕರ ಹಾಗೂ ಇತರರ ತಂಡ, ಸಮಾಜದ ಸದಸ್ಯರಿಂದ ಹಣವನ್ನು ಸಂಗ್ರಹಿಸಿ, ಕಾರವಾರ ನಾಡವರ ಸಮಾಜದ ಸದಸ್ಯರು ಹಾಗೂ ರೋಟರಿ ಕ್ಲಬ್ ಇವರ ಸಹಯೋಗದೊಂದಿಗೆ ಸಂತ್ರಸ್ತರಿಗೆ ಅಗತ್ಯವಾದ ಅಕ್ಕಿ, ಬೆಡ್‌ಶೀಟ್, ರಗ್ಗುಗಳನ್ನು ಒದಗಿಸಲು ಸಹಾಯ ಮಾಡಿರುತ್ತಾರೆ. ಶರಾವತಿ ನದಿಗೆ ನೆರೆ ಬಂದಾಗ, ನಾಡವರ ಸಮಾಜ ಬೆಂಗಳೂರು, ಇದರ ಕೆಲವು ಸದಸ್ಯರು ಶ್ರೀ ಬಿ.ಟಿ.ನಾಯಕ್‌ರವರ ನೇತೃತ್ವದಲ್ಲಿ ಅಲ್ಲಿಯ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿ ಕೆಲವು ಅಗತ್ಯ ವಸ್ತುಗಳನ್ನು ಒದಗಿಸಿದ್ದಲ್ಲದೇ, ತಮ್ಮ ಕೈಲಾದ ಸಹಾಯವನ್ನೂ ಮಾಡಿರುತ್ತಾರೆ. ಇತ್ತೀಚೆಗೆ ಎರಡು ವರ್ಷಗಳ ಹಿಂದೆ ಅಂಕೋಲಾ ತಾಲೂಕಿನ ಸಿರೂರಿನಲ್ಲಿ ಗುಡ್ಡ ಕುಸಿತದಲ್ಲಿ ನಿರಾಶ್ರಿತರಾದ ಉಳುವರೆ ಗ್ರಾಮಕ್ಕೆ ಸಮಾಜದ ಅಧ್ಯಕ್ಷರಾದ ಶ್ರೀ ಅರವಿಂದ ನಾಯಕರವರ ನೇತೃತ್ವದಲ್ಲಿ, ಕಾರ್ಯಕಾರಿ ಸಮಿತಿಯ ಸದಸ್ಯರು ಭೇಟಿ ನೀಡಿದ್ದು, ಊರ ನಾಗರೀಕರ ಸಮ್ಮುಖದಲ್ಲಿ ಸಂತ್ರಸ್ತರನ್ನು ಭೇಟಿ ಮಾಡಿ, ಸಾಂತ್ವನ ಹೇಳಿ, ಸಮಾಜದ ವತಿಯಿಂದ ಕೈಲಾದ ಸಹಾಯವನ್ನು ಮಾಡಿರುತ್ತಾರೆ. ಈ ಕಾರ್ಯಕ್ಕೆ ಬೆಂಗಳೂರು ಉತ್ತರ ಕನ್ನಡ ಸಂಘವೂ ಸಹ ಕೈಜೋಡಿಸಿದ್ದು, ಇದರಿಂದ ಯಶಸ್ವಿಯಾಗಿ ಸೇವೆ ಸಲ್ಲಿಸಲು ಸಾಧ್ಯವಾಗಿರುತ್ತದೆ.

3. ಬೆಂಗಳೂರು ನಾಡವರ ಆರೋಗ್ಯ ಶಿಬಿರ

ನಮ್ಮ ಬೆಂಗಳೂರು ನಾಡವ ಸಮಾಜ ಬಾಂಧವರಿಗಾಗಿ ಶ್ರೀಯುತ ಡಿ ಎನ್ ನಾಯಕ ಹೆಲ್ತ್ ಡಿಪಾರ್ಟ್ಮೆಂಟ್ ನ ಸೆಕ್ರೆಟರಿ ಇದ್ದಾಗ ಅವರ ಮುಂದಾಳತ್ವದಲ್ಲಿ ಕೆ ಸಿ ಜನರಲ್ ಹಾಸ್ಪಿಟಲ್ ಅಲ್ಲಿ ಒಂದು ದಿನದ ಆರೋಗ್ಯ ಶಿಬಿರವನ್ನು ಏರ್ಪಡಿಸಿದ್ದೆವು. ಸುಮಾರು ಮುನ್ನೂರಕ್ಕೂ ಹೆಚ್ಚಿನ ಸಮಾಜ ಬಾಂಧವರು ಅದರ ಪ್ರಯೋಜನ ಪಡೆದುಕೊಂಡಿದ್ದರು.ಮುಂದಿನ ದಿನಗಳಲ್ಲಿ ವರ್ಷಕ್ಕೊಂದು ಆರೋಗ್ಯ ಶಿಬಿರ ಏರ್ಪಡಿಸುವ ಯೋಜನೆಯು ಜೋಡಣೆಯ ಹಂತದಲ್ಲಿದೆ.

4. ಕೋವಿಡ್ ಸಂದರ್ಭದಲ್ಲಿ ಆನ್ಲೈನ್ ವೆಬಿನಾರ್

ಶ್ರೀ ಜೀವನಕುಮಾರ್ ಗಾಂವಕರ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಮ್ಮ ಸಮಾಜದ ಸುಮಾರು ಆರಕ್ಕೂ ಹೆಚ್ಚು ನುರಿತ ವೈದ್ಯರನ್ನು ಆನ್ಲೈನ್ ಜೂಮ್ ಮೀಟಿಂಗ್ ಗೆ ಆಹ್ವಾನಿಸಿ ಅವರೊಂದಿಗೆ ನಮ್ಮ ಸಮಾಜ ಬಾಂಧವರಿಗೆ ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ಜಗತ್ತಿಗೆ ಮಹಾಮಾರಿಯಾದ ಕೋವಿಡ್ ರೋಗದ ತಡೆ, ಅದರ ಕುರಿತಾದ ಕಾಳಜಿಯ ಚರ್ಚೆಯಲ್ಲಿ ಸುಮಾರು 150 ಕ್ಕೂ ಹೆಚ್ಚಿನ ಜನ ಜೂಮ್ ಮೀಟಿಂಗ್ ಹಾಗು ಸಾವಿರಕ್ಕೂ ಹೆಚ್ಚಿನ ಜನ ಯೌಟ್ಯೂಬ್ ಲೈವ್ ಅಲ್ಲಿ ವೀಕ್ಷಿಸಿದ್ದು ಬಹುಪ್ರಯೋಜನಕಾರಿಯಾಗಿ ಕಾರ್ಯಕ್ರಮ ಮೂಡಿಬಂದಿತ್ತು.

5. ಸಮಾಜದಿಂದ ಪರಿಸರ ಸ್ನೇಹಿ ಕಾರ್ಯಕ್ರಮಗಳು:

ನಾಡವರ ಸಮಾಜ ಬೆಂಗಳೂರು, ಇದು ಶ್ರೀ ಜೀವನ ಕುಮಾರ ಗಾಂವಕರ ಇವರು ಅಧ್ಯಕ್ಷರಾಗಿದ್ದ ಸಮಯದಲ್ಲಿ ಸಮಾಜದ ಬಾಂಧವರನ್ನು ಸೇರಿಸಿ ಬೆಂಗಳೂರಿನ ನಂದಿನಿ ಬಡಾವಣೆಯಲ್ಲಿನ ಪಾರ್ಕಿನಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತ್ತು.ಸದರಿ ಪಾರ್ಕಿನ ಹತ್ತಿರದಲ್ಲಿಯೇ ನಮ್ಮ ಸಮಾಜದ ಸದಸ್ಯರಾದ ಶ್ರೀ ಕೆ.ಆರ್. ನಾಯಕ್‌ರವರ ಮನೆಯಿದ್ದು, ನೆಟ್ಟ ಗಿಡಗಳಿಗೆ ನೀರು ಗೊಬ್ಬರ ಹಾಕಿ ಬೆಳೆಸುವ ಜವಾಬ್ದಾರಿಯನ್ನು ಸ್ವತಃ ಅವರೇ ವಹಿಸಿಕೊಂಡಿದ್ದು, ಸದರಿ ಗಿಡಗಳು ಚೆನ್ನಾಗಿ ಬೆಳೆದು ದೊಡ್ಡದಾಗಿ ಹಚ್ಚಹಸಿರಾಗಿ ಕಾಣುತ್ತಿರುವುದು ಸಂತೋಷದ ವಿಷಯವಾಗಿದೆ. ಇದೇ ಅವಧಿಯ ಇನ್ನೊಂದು ಸಂದರ್ಭದಲ್ಲಿ ಶ್ರೀ ಎಂ.ಆರ್. ನಾಯ್ಕ್ರವರ ನೇತೃತ್ವದಲ್ಲಿ ಅಂಕೋಲಾ ತಾಲೂಕಿನ ಹಿಚ್ಕಡ ಹಾಗೂ ಕೋಡ್ಯಾಣಿ ಗ್ರಾಮದಲ್ಲಿ ನೂರಾರು ಗಿಡಗಳನ್ನು ನೆಡಲಾಯಿತು. ಎರಡೂ ಕಡೆಗಳಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಿ, ಸುತ್ತಮುತ್ತಲಿನ ಊರ ನಾಗರೀಕರು, ಹಿರಿಯರು ಹಾಗೂ ಮಂಡಲ ಪಂಚಾಯತಿಯ ಅಧ್ಯಕ್ಷರು / ಸದಸ್ಯರುಗಳ ಸಮ್ಮುಖದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಊರ ನಾಗರೀಕರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಸಿ, ಪರಿಸರದ ಮೇಲಿರುವ ನಮ್ಮ ಕಾಳಜಿಯನ್ನು ವ್ಯಕ್ತಪಡಿಸಲಾಯಿತು. ಸದರಿ ಕಾರ್ಯಕ್ರಮಕ್ಕೆ ಪರಿಸರ ಪ್ರೇಮಿಗಳಾದ ಶ್ರೀ ಸುರೇಶ ಹೆಬ್ಳಿಕರ್ ಹಾಗೂ ಶ್ರೀ ಸುಕ್ರಿ ಬೊಮ್ಮ ಗೌಡರವರನ್ನು ಆಮಂತ್ರಿಸಲಾಗಿತ್ತು. ಇವರುಗಳ ಉಪಸ್ಥಿತಿಯು ಈ ಕಾರ್ಯಕ್ರಮಕ್ಕೆ ಇನ್ನಷ್ಟು ಮೆ